PKL10: ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿದ ಗುಜರಾತ್ ಜಯಂಟ್ಸ್ !

PKL10: ಬ್ಯಾಕ್ ಟು ಬ್ಯಾಕ್ ಜಯ ಸಾಧಿಸಿದ ಗುಜರಾತ್ ಜಯಂಟ್ಸ್ !

PKL10 : 5/12/2023: ಪ್ರೊ ಕಬಡ್ಡಿ ಸೀಸನ್ 10 ರ ಪಂದ್ಯಗಳು ಶುರುವಾಗಿದ್ದು ಗುಜರಾತ್ ಜಯಂಟ್ಸ್ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಗುಜರಾತ್ ಜಯಂಟ್ಸ್ ತಂಡದ ಹೋಂ ಗ್ರೌಂಡ್ ಅಲ್ಲೇ ಪಂದ್ಯಗಳು ನಡೆಯುತ್ತಿದ್ದು ಗುಜರಾತ್ ಜಯಂಟ್ಸ್ ಬ್ಯಾಕ್ ಟು ಬ್ಯಾಕ್ ಮುರು ಪಂದ್ಯಗಳನ್ನು ಜಯ ಸಾಧಿಸಿದೆ.ಯಾವ ಯಾವ ತಂಡದ ಜೊತೆ ಜಯ ಸಾಧಿಸಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಳಿಸಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೆ ರೀತಿಯ ಕ್ರೀಡೆಗೆ ಸಂಭಂದಿಸಿದ ಮುಖ್ಯ ವಿಚಾರಗಳನ್ನು ತಿಳಿದು ಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಇನ್ಕ್ ಅನ್ನು ಕೆಳಗೆ ನೀಡಲಾಗಿದೆ.

WHATSAPP

TELEGRAM

INSTAGRAM

MAIN WEBSITE

ಪ್ರೊ ಕಬಡ್ಡಿ ಲೀಗ್ 10 ರ ಪಂದ್ಯಗಳು ಶುರುವಾಗಿದ್ದು ಎಲ್ಲ ತಂಡಗಳು ಒಳ್ಳೆಯ ಪ್ರದರ್ಶನವನ್ನೇ ನೀಡುತಿದ್ದಾವೆ.ಗುಜರಾತ್ ಜಯಂಟ್ಸ್ ತಂಡದ ಹೋಂ ಗ್ರೌಂಡ್ ಅಲ್ಲಿ ಅಂದರೆ ಅಹಮದಾಬಾದ್ ಅಲ್ಲಿ ಪಂದ್ಯಗಳು ನಡೆಯುತ್ತಿದ್ದಾವೆ.ಇದೀಗ ಪ್ರೊ ಕಬಡ್ಡಿ ಲೀಗ್ 10 ಒಟ್ಟು 7 ಪಂದ್ಯಗಳು ಆಗಿವೆ.

ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳನ್ನು ಜಯಸಾಧಿಸಿದ ಗುಜರಾತ್ ಜಯಂಟ್ಸ್ :

PKL10 : 5/12/2023: ಪ್ರೊ ಕಬಡ್ಡಿ ಲೀಗ್ ೧೦ ರ ಪಂದ್ಯಗಳು ಮೊದಲಿಗೆ ಗುಜರಾತ್ ಜಯಂಟ್ಸ್ ಹೋಂ ಗ್ರೌಂಡ್ ಅಂದರೆ ಅಹಮದಾಬಾದ್ ನಲ್ಲಿ ನಡೆಯುತಿದ್ದು.ಗುಜರಾತ್ ಜಯಂಟ್ಸ್ ಗೆ ಬ್ಯಾಕ್ ಟು ಬ್ಯಾಕ್ ಪಂದ್ಧ್ಯಗಳು ಇದಾವೆ.

.ಗುಜರಾತ್ ಜಯಂಟ್ಸ್ VS ತೆಲಗು ಟೈಟಾನ್ಸ್ :

ಪ್ರೊ ಕಬಡ್ಡಿ ಲೀಗ್ ಮೊದಲ ಪಂದ್ಯ ಗುಜರಾತ್ ಜಯಂಟ್ಸ್ vs ತೆಲಗು ಟೈಟಾನ್ಸ್ ನಡುವೆ ರೋಚಕ ಪಂದ್ಯ ಅಹಮದಾಬಾದ್ ಅಲ್ಲಿ 2/12/2023 ರಂದು ನಡೆಯಿತು. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ತಮ್ಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿ ಆಗಿದ್ದಾರೆ. ನಡೆದ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತೆಲಗು ಟೈಟಾನ್ಸ್ ತಂಡದ ವಿರುದ್ಧ ಗೆದ್ದು ಜಯ ಸಾಧಿಸಿದೆ. 38-32 ರ ಅಂತರದಿಂದ ಗುಜರಾತ್ ಜಯಂಟ್ಸ್ ತಂಡವು ತೆಲಗು ಟೈಟಾನ್ಸ್ ತಂಡವನ್ನು ಸೋಲಿಸಿದೆ. ಗುಜರಾತ್ ಜಯಂಟ್ಸ್ ತಂಡದ ಆಟಗಾರರು ರೈಡರ್ ಸೋನು ೧೧ ರೈಡ್ ಪಾಯಿಂಟ್ಸ್ ಪಡೆಯುವಲ್ಲಿ ಯಶಸ್ವಿ ಆಗಿದ್ದರೆ.ಮತ್ತು ಮತ್ತೊಬ್ಬ ರೈಡರ್ ರಾಕೇಶ್ ಅವರು ೫ ರೈಡ್ ಪಾಯಿಂಟ್ಸ್ ಪಡೆಯುವಲ್ಲಿ ಯಶಸ್ವಿ ಆಗುತ್ತಾರೆ.ಇದರಿಂದ ತಂಡದ ಪಾಯಿಂಟ್ಸ್ ಹೆಚ್ಗಳು ಕಾರಣವಾಗುತ್ತದೆ.ಹಾಗು ಈ ಪಂದ್ಯದಲ್ಲಿ ತೆಲಗು ಟೈಟಾನ್ಸ್ ತಂಡದ ನಾಯಕ ಪವನ್ ಶೆಹಾರವಾತ್ ಸೂಪರ್ ೧೦ ಮಾಡುತ್ತಾರೆ.ಆದರೆ ತಂಡದ ಉಳಿದ ಆಟಗಾರರು ಅಂದರೆ ಡಿಫೆಂಡಿಂಗ್ ಅಲ್ಲಿ ಒಳ್ಳೆಯ ಪ್ರದರ್ಶನ ಸಿಗದ ಕಾರಣ ತಂಡದ ಸೋಲಿಗೆ ಕಾರಣವಾಗುತ್ತದೆ.ಹಾಗಾಗಿ ಪಂದ್ಯವನ್ನು ಗೆದ್ದು ಗುಜರಾತ್ ಜಯಂಟ್ಸ್ ತಂಡವು ೫ ಪಾಯಿಂಟ್ಸ್ ಪಡೆಯುತ್ತದೆ ಮತ್ತು ತೆಲಗು ಟೈಟಾನ್ಸ್ ತಂಡವು ೧ ಪಾಯಿಂಟ್ಸ್ ಅನ್ನ ಪಡೆಯುತ್ತದೆ.

೨. ಬೆಂಗಳೂರು ಬುಲ್ಸ್ VS ಗುಜರಾತ್ ಜಯಂಟ್ಸ್:

ಪ್ರೊ ಕಬಡ್ಡಿ ಲೀಗ್ ನಲ್ಲಿ ನಾಲ್ಕನೇ ಪಂದ್ಯ ಹಾಗು ಗುಜರಾತ್ ಜಯಂಟ್ಸ್ ಗೆ ಇದು ಎರಡನೇ ಪಂದ್ಯ ಆಗಿದೆ.3/12/2023 ರಂದು ನಡೆದ ಗುಜರಾತ್ ಜಯಂಟ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಾಲ ನಡುವೆ ನಡೆದ ಪಂದ್ಯದಲ್ಲಿ ಗುಜರಾತ್ ತಂಡವು ಬೆಂಗಳೂರು ಬುಲ್ಸ್ ಅನ್ನು ಸೋಲಿಸಿ ತನ್ನ ಎರಡನೇ ಗೆಲವನ್ನು ಸಾಧಿಸಿತು.ಈ ಪಂದ್ಯದಲ್ಲಿ ಕೊನೆಯವರೆಗೂ ಯಾರು ಗೆಲ್ಲುರ್ಟ್ಟ್ಟರೆ ಎಬಂದು ಹೇಳಲು ಆಗದ ರೀತಿಯಲ್ಲಿ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿತು. ಕೊನೆಯ ಎರಡು ನಿಮಿಷಗಳಲ್ಲಿ ಗುಜರಾತ್ ಜಯಂಟ್ಸ್ ತಂಡವು ಒಳ್ಳೆಯ ಪ್ರದರ್ಶನ ನೀಡಿ ಜಯ ಸಾಧಿಸಿತು.34-31ರ ಅಂತರದಿಂದ ಬೆಂಗಳೂರು ಬುಲ್ಸ್ ನ ಸೋಲಿಸಿ ಜಯ ಸಾಧಿಸಿತು. ಇದರಿಂದಾಗಿ ಗುಜರಾತ್ ಜಯಂಟ್ಸ್ ತನ್ನ ಎರಡನೇ ಗೆಲುವನ್ನು ಖಚಿತಪಡಿಸಿಕೊಂಡಿತು.ಪಂದ್ಯದ ಮೊದಲ ಅರ್ಧದಲ್ಲಿ ಬೆಂಗಳೂರು ಬುಲ್ಸ್ ತಂಡವು ಮುನ್ನೆಡೆ ಸಾಧಿಸಿತು.ಆದರೆ ದ್ವಿತೀಯಾರ್ಧದದಲ್ಲಿ ಬೆಂಗಳೂರು ಬುಲ್ಸ್ ಒಳ್ಳೆಯ ಪ್ರದರ್ಶನ ನೀಡಿದರು ಸಹ ಒಂದು ರೇಡ್ ನಿಂದ ಆಟದ ದಿಕ್ಕು ಬದಲಾಯಿತು. ಈ ಪಂದ್ಯದಲ್ಲೂ ಸಹ ಗುಜರಾತ್ ಜಯಂಟ್ಸ್ ತಂಡದ ಆಟಗಾರ ಸೋನು ಅವರು ರೈಡಿಂಗ್ ಅಲ್ಲಿ ಮಿಂಚಿದರು ಇದು ತಂಡದ ಗೆಲುವಿಗೆ ಕಾರಣವಾಯಿತು.

೩. ಯು ಮುಂಬ VS ಗುಜರಾತ್ ಜಯಂಟ್ಸ್ :

ಪ್ರೊ ಕಬಡ್ಡಿ ಲೀಗ್ ನ ಏಳನೇ ಪಂದ್ಯ ಹಾಗು ಗುಜರಾತ್ ಜಯಂಟ್ಸ್ ಗೆ ಮೂರನೇ ಪಂದ್ಯ.5/12/2023 ರಂದು ನಡೆದ ಯು ಮುಂಬಾ vs ಗುಜರಾತ್ ಜಯಂಟ್ಸ್ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡವು ಯು ಮುಂಬಾ ವಿರುದ್ಧ ಜಯ ಸಾಧಿಸಿತು. ಪಂದ್ಯದ ಮೊದಲರ್ಧ೦ದಲ್ಲಿ ಯು ಮುಂಬಾ ತಂಡವು ಗುಜರಾತ್ ಜಯಂಟ್ಸ್ ತಂಡವನ್ನು18-16 ಪಾಯಿಂಟ್ಸ್ ಗಳ ಅಂತರದಲ್ಲಿ ಹಿಂದಿಕ್ಕಿ ಮುನ್ನಡೆ ಸುಗುತ್ತಿತ್ತು. ಆದರೆ ದ್ವಿತೀಯ ಅರ್ಧದಲ್ಲಿ ಗುಜರಾತ್ ಜಯಂಟ್ಸ್ ತಂಡವು ಯು ಮುಂಬವನ್ನು ಸೋಲಿಸಿ 39-37 ರ ಅಂತರದಲ್ಲಿ ಗೆಲುವನ್ನು ಸಾಧಿಸಿತು.ಈ ಪಂದ್ಯದಲ್ಲೂ ಕೂಡ ಗುಜರಾತ್ ತಂಡದ ರೈಡರ್ ಸೋನು ಅವರ ತಮ್ಮ ಮಿಂಚಿನ ಆಟ ಪ್ರದರ್ಶನ ಮಾಡಿಸಿದ್ದಾರೆ. ಮತ್ತು ತಂಡದ ನಾಯಕ ಫಜಲ್ ಅವರು ಡಿಫೆಂಡಿಂಗ್ ಅಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ಹೀಗಾಗಿ ತಂಡದ ಗೆಲುವಿಗೆ ಕಾರಣವಾಯಿತು.ಉ ಮುಂಬಾ ಒಳ್ಳೆಯ ಪ್ರದರ್ಶನ ನೀಡಿದ್ದರು ಸಹ ಕೊನೆಯ ನಿಮಿಷದಲ್ಲಿ ಪಂದ್ಯವನ್ನು ಕೈ ಬಿಟ್ಟರು.ಹೀಗಾಗಿ ಗುಜರಾತ್ ತಂಡವು ಪ್ರೊ ಕಬಕಬಡ್ಡಿ ಲೀಗ್ ನಲ್ಲಿ ತಮ್ಮ ಮೂರನೇ ಗೆಲವನ್ನು ಸಾಧಿಸಿತು.

ಹೀಗೆ ಇದೆ ರೀತಿಯ ಕ್ರೀಡೆಗೆ ಸಂಭಂದಿಸಿದ ವಿಷಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ್ ಚಾನೆಲ್ ಗಳಿಗೆ ಜಾಯಿನ್ ಆಗಿ. ಚಾನೆಲ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

whatsapp

telegram

instagram

main website

Leave a Reply

Your email address will not be published. Required fields are marked *