ಕಬಡ್ಡಿ ಸ್ಟಾರ್ ಆಟಗಾರರಿಗೆ ಬಿಗ್ ಶಾಕ್! PKL 10 Auction ಅಲ್ಲಿ Unsold ಆದ ಸ್ಟಾರ್ ಆಟಗಾರರು ಯಾರು?..

ಕಬಡ್ಡಿ ಸ್ಟಾರ್ ಆಟಗಾರರಿಗೆ ಬಿಗ್ ಶಾಕ್! PKL 10 Auction ಅಲ್ಲಿ Unsold ಆದ ಸ್ಟಾರ್ ಆಟಗಾರರು ಯಾರು?..

ಎಲ್ಲಾರಿಗೂ ನಮಸ್ಕಾರ,

ಕಬಡ್ಡಿ ಸ್ಟಾರ್ ಆಟಗಾರರಿಗೆ ಬಿಗ್ ಶಾಕ್! PKL 10 Auction ಅಲ್ಲಿ Unsold ಆದ ಸ್ಟಾರ್ ಆಟಗಾರರು ಯಾರು?..

ನಮಗೆ ತಿಳಿದಿರುವ ಹಾಗೆ ಪ್ರೊ ಕಬಡ್ಡಿ ಯು ದೇಶದಲ್ಲಿ ಒಂದು ಉತ್ತಮ ಸ್ಥಾನ ಪಡೆದಿದೆ.ಪ್ರತಿವರ್ಷವೂ ಕೂಡಾ ತಂಡದ ಮಾಲಿಕರು (franchise ) ತಮ್ಮ ತಂಡವನ್ನು Auction bid ಅಲ್ಲಿ ಆಟಗಾರರನ್ನು ಖರೀದಿಸಿ ತಂಡವನ್ನು ರಚಿಸಿರುತ್ತಾರೆ, ಇದು ನಮೆಲ್ಲರಿಗೂ ತಿಳಿದಿರುವ ವಿಷಯ ,ಇದೇ ರೀತಿ ಕಳೆದ 9 ವರ್ಷದಿಂದ ನಡೆದು ಬಂದಿದೆ . ಈಗ ಪ್ರೊ ಕಬಡ್ಡಿ 10 ಶುರುವಾಗಿದ್ದು ಕಬಡ್ಡಿ ಪ್ರಿಯರಿಗೆ ಖುಷಿಯ ವಿಚಾರ , ತಮಗೆ ಇಷ್ಟವಾದ ತಂಡಕ್ಕೆ ಯಾವ ಆಟಗಾರ ಸೇರ್ಪಡೆ ಆಗುತ್ತಾರೆ ಎಂದು ಕಾದು ಕೂತಿದ್ದ ಕಬಡ್ಡಿ ಅಭಿಮಾನಿಗಳು. ಇದರಂತೆ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಪ್ರೊ ಕಬಡ್ಡಿ ( PKL 10 auction ) ಅಕ್ಟೋಬರ್ 9ಮತ್ತು 10ರಂದು ನಡೆದಿದ್ದು ತಂಡದ ಮಾಲಿಕರು (franchise) ಆಟಗಾರರನ್ನು ಖರದಿಸಿ ತಮ್ಮ ತಂಡಕ್ಕೆ ಸೇರಿಸಿ ಕೊಳ್ಳಲಾಗಿದೆ. ಇದು ಒಂದು ಕಡೆ ಆದರೆ ಅನೇಕ ಸ್ಟಾರ್ ಆಟಗಾರರಿಗೆ PKL 10 auction ಅಲ್ಲಿ ಸಿಕ್ಕಿದೆ ಬಿಗ್ ಶಾಕ್! ಏಕೆ. ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಪ್ರಮುಖ ಮಾಹಿತಿ:

ಟೆಲಿಗ್ರಾಂ (Telegram) ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್ (Watsapp) group ge ಸೇರಲು ಇಲ್ಲಿ ಕ್ಲಿಕ್ ಮಾಡಿ

PkL 10 Auction

ಅಕ್ಟೋಬರ್ 9 ಮತ್ತು 10 ರಂದು ನಡೆದ PKL 10 auction bid ಅಲ್ಲಿ ದುಬಾರಿ ಮೊತ್ತಕ್ಕೆ ಖರೀದಿಯಾದ ಆಟಗಾರರು:

  1. ಪವನ್ ಸೆಹರವತ್ (Pawan Sehrawat ) :- 2. 605 ಕೋಟಿ ಗೆ ತೆಲುಗು ಟೈಟಾನ್ಸ್ ಗೆ .
  2. ಮಹಮ್ಮದ್ರೆಜ ಚಿಯನೇಶ್ (Mohammadreza Chiyanesh):-2.35 ಕೋಟಿ ಪುಣೆರಿ ಪಲ್ಟನ್ ಗೆ.
  3. ಮನಿಂದರ್ ಸಿಂಗ್ (Manindar singh):-2.12ಕೋಟಿ ಬೆಂಗಾಲ್ ವಾರಿಯರ್ ಗೆ.
  4. ಫಝಲ್ ಅತ್ರಚಲಿ (Fazal Atrachali):-1.60ಕೋಟಿ ಗುಜರಾತ್ ಜೈಂಟ್ಸ್ ಗೆ.
  5. ಸಿದ್ಧಾರ್ಥ್ ದೇಸಾಯಿ (Sidharth Desai):-1. 00ಕೋಟಿ ಹರಿಯಾಣ ಸ್ಟೀಲಾರ್ಸ್ ಗೆ.

ಈ ಐದು ಆಟಗಾರರು ಪ್ರೊ ಕಬಡ್ಡಿ ಯಲ್ಲಿ ಅತಿ ಹೆಚ್ಚು ಮೊತ್ತ ಕ್ಕೆ ಖರೀದಿಯಾದವರು. ಇದು ಒಂದು ಕಡೆ ಖುಷಿಯ ವಿಚಾರ ಆದರೆ Auction bid ಊಹಿಲಸಾಧ್ಯವಾದ ಸ್ಟಾರ್ ಆಟಗಾರರು Unsold ಆಗಿರುವುದೇ ಬೇಜಾರು ಆಗಿದೆ. ಹಾಗಾದರೆ Unsold ಆದ ಸ್ಟಾರ್ ಆಟಗಾರರು ಯಾರು ಎಂದು ತಿಳಿಯೋಣ.

Unsold ಆದ ಸ್ಟಾರ್ ಆಟಗಾರರು:

  1. ದೀಪಕ್ ನಿವಾಸ್ ಹೂಡಾ (Deepak Niwas Hooda).
Unsold ಆದ ಸ್ಟಾರ್ ಆಟಗಾರರು:ದೀಪಕ್ ನಿವಾಸ್ Hooda

ದೀಪಕ್ ನಿವಾಸ್ ಹೂಡಾ ಅವರ Auction alli Unsold ಆಗಿರುವುದು ಬೇಜಾರಾಗುವ ಸಂಗತಿ. ಇವರು ಒಬ್ಬ ಭಾರತದ ಕಬಡ್ಡಿ ಆಟಗಾರ ಮತ್ತು ಇವರು ಭಾರತ ಕಬಡ್ಡಿ ತಂಡದ ಮಾಜಿ ನಾಯಕ. ಭಾರತ ತಂಡಕ್ಕೆ ಇವರ ಕೊಡುಗೆ ತುಂಬಾ ಅಪಾರವಾದದ್ದು. ಇವರ ನಾಯಕತ್ವ ದಲ್ಲಿ ಅನೇಕ ಭಾರಿ ಭಾರತವು ಗೆದ್ದಿದೆ . ಇನ್ನು ಪ್ರೊ ಕಬಡ್ಡಿ ಗೆ ಬಂದರೆ ಇದರಲ್ಲೂ ಕೂಡಾ ಇವರ ಕೊಡುಗೆ ತುಂಬಾ ಅಪಾರವಾಗಿದೆ . ಇವರು ಒಬ್ಬ ಆಲ್ ರೌಂಡರ್ ಆಟಗಾರ . ಇವರು ಪ್ರೊ ಕಬಡ್ಡಿ ಯಲ್ಲಿ ಈ ಹಿಂದಿನ ಸೀಸನ್ ಅಲ್ಲಿ 3ತಂಡಗಳಲ್ಲಿ ಆಡಿದ್ದಾರೆ.2014 ರಿಂದ ಇವರ ಪ್ರೊ ಕಬಡ್ಡಿ ಶುರುವಾಗಿ ಮೊದಲಿಗೆ ತೆಲುಗು ಟೈಟಾನ್ಸ್ ನಂತರ ಪುಣೆರಿಪಲ್ಟನ್ ನಂತರ ಜೈಪುರ್ ಪಿಂಕ್ ಪ್ಯಾಂಥರ್ ತಂಡದಲ್ಲಿ ಆಡಿದ್ದಾರೆ . ಆದರೆ PKl 10 Auction ಅಲ್ಲಿ ಇವರು Unsold ಆಗಿರುವುದೇ ಒಂದು ಆಘಾತ.

2.ರಾಹುಲ್ ಚೌದರಿ (Rahul choudhari)

Unsold ಆದ ಸ್ಟಾರ್ ಆಟಗಾರರು: Rahul choudhari

ರಾಹುಲ್ ಅವರು ಕೂಡ ಭಾರತ ತಂಡದ ಒಬ್ಬ ಕಬಡ್ಡಿ ಆಟಗಾರ. ಇವರು ಕೂಡ ಭಾರತ ತಂಡಕ್ಕೆ ನೀಡಿರುವ ಕೊಡುಗೆ ತುಂಬಾ ಅಪಾರವಾದುದು.ಇನ್ನೂ ಪ್ರೊ ಕಬಡ್ಡಿ ಗೆ ಬಂದರೆ ಇದರಲ್ಲಿ ಇವರದ್ದು ದಾಖಲೆಗಳು ಯೆದ್ದು ಕಾಣಿಸುತ್ತವೆ.ಪ್ರೊ ಕಬಡ್ಡಿಯಲ್ಲಿ ಒಬ್ಬ ಮುಖ್ಯ ರೈಡರ್ ಆಗಿರುವ ಇವರು ಪ್ರೊ ಕಬಡ್ಡಿಯಲ್ಲಿ ,500,700,ಮತ್ತು 800 ರೈಡ್ ಪಾಯಿಂಟ್ ಗಳಿಸಿದ ಮೊದಲ ಆಟಗಾರ.ಇವರನ್ನು ಒಬ್ಬ ರೈಡ್ ಮಷೀನ್ ಎಂದೇ ಪ್ರಖ್ಯಾತಿ ಪಡೆದಿರುವ ರಾಹುಲ್ ಅವರು 6 ಸೀಸನ್ ಗಳು ತೆಲುಗು ಟೈಟಾನ್ಸ್ ಅಲ್ಲೇ ಆಡಿದ್ದಾರೆ ಮಾತು 1 ಸೀಸನ್ ತಮಿಳ್ ತಲೈವಾಸ್ ತಂಡಕ್ಕೆ ಆಡಿದಾದರೆ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ ತಂಡದಲ್ಲಿ ಆಡಿದ್ದಾರೆ.ಆದರೆ ಈ ವರ್ಷ ನಡೆದ auction ಅಲ್ಲಿ ಇವರು unsold ಆಗಿದ್ದಾರೆ .ಇದು ಕಬಡ್ಡಿ ಅಭಿಮಾನಿಗಳಿಗೆ ಒಂದು ಆಘಾತ ತಂದಿದೆ.

3.ವಿಶಾಲ್ ಭಾರದ್ವಾಜ್ (Vishal Bharadwaj)

Unsold ಆದ ಸ್ಟಾರ್ ಆಟಗಾರರು: Vishal Bharadwaj

ವಿಶಾಲ್ ಅವರು ಕೂಡ ಒಬ್ಬ ಭಾರತ ತಂಡದ ಕಬಡ್ಡಿ ಆಟಗಾರ. ಇವರ ಕೊಡುಗೆ ಭಾರತ ತಂಡಕ್ಕೆ ಅಪಾರವಾಗಿದೆ.ಇನ್ನೂ ಪ್ರೊ ಕಬಡ್ಡಿ ಗೆ ಬಂದರೆ ಇದರಲ್ಲಿ ಇವರದ್ದು ಮುಖ್ಯ ಪಾತ್ರವಿದೆ. ಇವರು ಒಬ್ಬ ಲೆಫ್ಟ್ ಕಾರ್ನರ್ ಡಿಫೆಂಡರ್. ಇವರು ಪ್ರೊ ಕಬಡ್ಡಿ ಯಲ್ಲಿ ತೆಲುಗು ಟೈಟಾನ್ಸ್ ತಂಡಕ್ಕೆ 3 ಸೀಸನ್ ಅಲ್ಲಿ ಆಡಿದ್ದಾರೆ .ಮತ್ತು ಸೀಸನ್ 6 ಅಲ್ಲಿ ಇವರು ತೆಲುಗು ಟೈಟಾನ್ಸ್ ತಂಡಕ್ಕೆ ನಾಯಕರಾಗಿ ಆಡಿದ್ದಾರೆ .ಆದರೆ ಈಗ 2023 PKl 10 Auction ಅಲ್ಲಿ ಇವರು Unsold ಆಗಿರುವುದೇ ಆಘಾತವಾಗಿದೆ.

4.ಮೋನು ಗೊಯತ್ (Monu Goyat)

Unsold ಆದ ಸ್ಟಾರ್ ಆಟಗಾರರು:Monu Goyat

ಇವರು ಸಹಾ ಭಾರತ ಕಬಡ್ಡಿ ಆಟಗಾರ. ಇವರು ಕೂಡ ಭಾರತ ತಂಡಕ್ಕೆ ನೀಡಿರುವ ಕೊಡುಗೆ ತುಂಬಾ ಅಪಾರವಾದುದು.ಇನ್ನೂ ಪ್ರೊ ಕಬಡ್ಡಿ ಗೆ ಬಂದ್ರೆ ಇವರು ಪಾಟ್ನಾ ಪೈರೇಟ್ಸ್ ತಂಡಕ್ಕೆ ಆಡಿದ್ದಾರೆ.ಮತ್ತು ಇವರು ಪಾಟ್ನಾ ಪೈರೇಟ್ಸ್ ತಂಡದ ನಾಯಕ ಆಗಿ ಆಡಿದ್ದಾರೆ.ಇವರು ಪಾಟ್ನಾ ಪೈರೇಟ್ಸ್ ತಂಡದಲ್ಲ ಮಾತ್ರ ಆಡಿದ್ದಾರೆ .ಇವರು ಒಬ್ಬ ರೈಡರ್ ಆಗಿ ಕಬಡ್ಡಿ ಆಟದಲ್ಲಿ ಆಡಿ ನೋಡುವವರಿಗೆ ಸಂತಸ ತರುವ ರೀತಿಯಲ್ಲಿ ಆಡಿದ್ದಾರೆ . ಆದರೆ ಈಗ PKl 10 ಸೀಸನ್ ಅಲ್ಲಿ Unsold ಆಗಿದ್ದಾರೆ .

5. ರೋಹಿತ್ ಕುಮಾರ್ (Rohith Kumar )

Unsold ಆದ ಸ್ಟಾರ್ ಆಟಗಾರರು:Rohith Kumar

(Akki) ಎಂದೇ ಪ್ರಖ್ಯಾತಿ ಪಡೆದಿರುವ ರೋಹಿತ್ ಕುಮಾರ್ ಅವರು ಭಾರತ ತಂಡದ ಕಬಡ್ಡಿ ಆಟಗಾರ. ಈತ ಒಬ್ಬ ರೈಡರ್. ಪ್ರೊ ಕಬಡ್ಡಿಯಲ್ಲಿ ಇವರು 2016 ಅಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಪರವಾಗಿ ಆಡಿದ್ದಾರೆ.2017 ರಿಂದ 2019 ರ ವರೆಗೆ ಬೆಂಗಳೂರು ಬುಲ್ಸ್ ಪರವಾಗಿ ಆಡಿದ್ದಾರೆ .ಮತ್ತು ಇವರು ಬೆಂಗಳೂರು ಬುಲ್ಸ್ ತಂಡದಲ್ಲಿ ನಾಯಕನಾಗಿ ಆಡಿದ್ದಾರೆ .2021 ರಲ್ಲಿ ತೆಲುಗು ಟೈಟಾನ್ಸ್ ಪರವಾಗಿ ಆಡಿದ್ದಾರೆ. 2019 ಅಲ್ಲಿ ಇವರ ನಾಯಕತ್ವದಲ್ಲಿ ಬೆಂಗಳೂರು ಬುಲ್ಸ್ ಗೆದ್ದಿದೆ.ಆದರೆ PKl 10 Auction alli ಇವರು unsold ಆಗಿದ್ದಾರೆ.

ಸಂದೀಪ್ ನರ್ವಾಲ್ (Sandeep Narwal)

Unsold ಆದ ಸ್ಟಾರ್ ಆಟಗಾರರು:Sandeep Narwal

ಸಂದೀಪ್ Narwal ಇವರು ಒಬ್ಬ ಭಾರತದ ಕಬಡ್ಡಿ ಆಟಗಾರ.ಇವರು ಮೊದಲು ಪಾಟ್ನಾ ಪೈರೇಟ್ಸ್ ತಂಡದಲ್ಲಿ 3ಸೀಸನ್ ಆಡಿದ್ದಾರೆ. ಮತ್ತು ಇವರು ಸೀಸನ್ 2ರಲ್ಲಿ ತಂಡದ ನಾಯಕ ಆಗಿ ಆಡಿದ್ದಾರೆ. ನಂತರ 3 ನೆ ಸೀಸನ್ ಅಲ್ಲಿ ಇವರು ತೆಲುಗು ಟೈಟಾನ್ಸ್ ತಂಡದ ಪರವಾಗಿ ಆಡಿದ್ದಾರೆ. ಮತ್ತು ಸೀಸನ್ 5 ರಲ್ಲಿ 72.6 ಲಕ್ಷ ಗೆ ಖರೀದಿ ಆಗಿ ಪುಣೆರಿ ಪಲ್ಟನ್ ತಂಡದ ಪರವಾಗಿ ಆಡಿದ್ದಾರೆ. ಸೀಸನ್ 6 ಅಲ್ಲು ಸಹಾ ಪುಣೆ ತಂಡಕ್ಕೆ ಆಡಿದ್ದಾರೆ. ಸೀಸನ್ 7 ಯು ಮುಂಬಾ ತಂಡದ ಪರವಾಗಿ ಆಡಿದ್ದಾರೆ. ಇವರು ಒಬ್ಬ ಒಳ್ಳೆಯ ಉತ್ತಮ ಆಲ್ರೌಂಡರ್ ಸಾಲಿನಲ್ಲಿ ಇವರು ಕೂಡ ಒಬ್ಬರು.

ಪ್ರಮುಖ ಮಾಹಿತಿ:

ಇನ್ನೂ ಇದೆ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಹಾಗೂ ಇನ್ನಿತರ ಮುಖ್ಯ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಟೆಲಿಗ್ರಾಂ (Telegram) ಮತ್ತು ವಾಟ್ಸಾಪ್ (WhatsApp) group ge join ide ರೀತಿಯ ಹೆಚ್ಚಿನ ವಿಷಯಗಳನ್ನ ಕನ್ನಡದಲ್ಲಿ ತಿಳಿಸಲಾಗುತ್ತದೆ.

ಮುಖ್ಯ ಲಿಂಕ್ ಗಳು

TELEGRAM ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

WHATSAPP ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

WEBSITE ನೋಡಲು ಇಲ್ಲಿ ಕ್ಲಿಕ್ ಮಾಡಿ.

ಧನ್ಯವಾದಗಳು

One thought on “ಕಬಡ್ಡಿ ಸ್ಟಾರ್ ಆಟಗಾರರಿಗೆ ಬಿಗ್ ಶಾಕ್! PKL 10 Auction ಅಲ್ಲಿ Unsold ಆದ ಸ್ಟಾರ್ ಆಟಗಾರರು ಯಾರು?..

Leave a Reply

Your email address will not be published. Required fields are marked *