ಬಿಗ್ ನ್ಯೂಸ್: ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕ!? ಇಲ್ಲಿದೆ ನೋಡಿ..

ಬಿಗ್ ನ್ಯೂಸ್: ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕ!? ಇಲ್ಲಿದೆ ನೋಡಿ..

ಐಪಿಎಲ್ 2024: ಮುಂಬೈ ಇಂಡಿಯನ್ಸ್ ತಂಡದಿಂದ 15/12/2023ರಂದು ಅಧಿಕೃತವಾಗಿ ಒಂದು ಸುದ್ದಿ ಹೊರ ಬಿದ್ದಿದೆ.ಅದುವೇ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸಿ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕರನ್ನು ಆರಿಸಿದ್ದಾರೆ. ಈ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ.ಇದೆ ರೀತಿಯ ಇನ್ನಷ್ಟು ಮುಖ್ಯ ವಿಚಾರಗಳನ್ನು ತಿಳಿದುಕೊಳ್ಲಲು ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ:

ಐಪಿಎಲ್ 2024: ಮುಂಬೈ ಇಂಡಿಯನ್ಸ್ ತಂಡದಿಂದ ಬಂದ ಅಧಿಕೃತ ಮಾಹಿತಿಯ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಗಿದ್ದ ರೋಹಿತ್ ಶರ್ಮ ರನ್ನು ನಾಯಕ ಸ್ಥಾನದಿಂದ ವಜಾ ಗೊಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕರಾಗಿ ನೇಮಿಸಿದ್ದಾರೆ.ಐಪಿಎಲ್ 2024 ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಅವರು ಮುನ್ನೆಡೆಸಲಿದ್ದಾರೆ.2022ರಲ್ಲಿ ಐಪಿಎಲ್ ಅಲ್ಲಿ 2 ಹೊಸ ತಂಡಗಳು ಸೇರ್ಪಡೆಗೊಂಡವು.ಇದರಲ್ಲಿ ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯರನ್ನಾಗಿ ನೇಮಿಸಿದರು.ಹಾಗು ಹಾರ್ದಿಕ್ ಪಂದ್ಯ ತಂಡವನ್ನು ಮುನ್ನೆಡಿಸಿ ಅದೇವರ್ಷ ಐಪಿಎಲ್ ಅಲ್ಲಿ ಕಪ್ ಗೆದ್ದು ಚಾಂಪಿಯನ್ಸ್ ಆದರು.ಹಾಗು 2023 ರ ಐಪಿಎಲ್ ಅಲ್ಲಿ ಫೈನಲ್ ವರೆಗೂ ತಲುಪಿ ರನ್ನರ್ ಅಪ್ ಆದರು.2024ರ ಐಪಿಎಲ್ ಗೆ ಟ್ರೇಡ್ ಮೂಲಕ ಮುಂಬೈಯ್ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆ ಆದ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕರಾಗಿ ನೇಮಸಿದ್ದಾರೆ.

ರೋಹಿತ್ ಶರ್ಮಾ ನಾಯಕರಾಗಿ ಮುಂಬೈ ಇಂಡಿಯನ್ಸ್ ಗೆ ನೀಡಿದ ಕೊಡುಗೆ:

ಸತತ ಹತ್ತು ವರ್ಷಗಳ ಕಾಲ ಐಪಿಎಲ್ ನಲ್ಲಿ ಯಶಸ್ವಿಯಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನೆಡಿಸಿದ್ದರು.ಇದೀಗ ರೋಹಿತ್ ಶರ್ಮ ಅವರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನ ಯುಗಾಂತ್ಯ ಕಂಡಿದೆ.ಮುಂಬೈ ಇಂಡಿಯನ್ಸ್ ತಂಡದಿಂದ ಬಂದ ಅಧಿಕೃತ ಮಾಹಿತಿಯ ಪ್ರಕಾರ ರೋಹಿತ್ ಶರ್ಮ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿ ಹಾರ್ದಿಕ್ ಪಾಂಡ್ಯಾ ಅವರನ್ನು ನಾಯಕನಾಗಿ ನೇಮಿಸಿದ್ದಾರೆ. ಸತತ ಹತ್ತು ವರ್ಷಗಳ ಕಾಲ ರೋಹಿತ್ ಶರ್ಮಾ ನಾಯಕರಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡಿಸಿ ೫ ಬಾರಿ ಐಪಿಎಲ್ ಅಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಯಶಸ್ವಿ ತಂಡ ಎನಿಸಿಕೊಂಡಿದೆ.2013,2015,2017,2019,ಹಾಗು 2020 ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಟ್ರೋಫಿ ಅನ್ನು ಮುಡಿಗೇರಿಸಿಕೊಂಡಿತು.ಇದರರಲ್ಲಿ ನಾಯಕರಾಗಿದ್ದ ರೋಹಿತ್ ಶರ್ಮಾ ಅವರ ಪಾತ್ರ ಬಹು ಮುಖ್ಯವಾದುದ್ದು.ಹಾಗು ಮುಂಬೈ ಇಂಡಿಯನ್ಸ್ ತಂಡಕ್ಕೆ ಅವರ ನಾಯಕತ್ವ ಅಪಾರವಾದ ಕೊಡುಗೆ ನೀಡಿದೆ.ಮುಂದೆ ಬರುವ ಐಪಿಎಲ್ ೨೦೨೪ ರಲ್ಲಿ ರೋಹಿತ್ ಶರ್ಮ ಅವರು ತಂಡದಲ್ಲಿ ಓರ್ವ ಆಟಗಾರರಾಗಿರುತ್ತಾರೆ. ಮುಂಬೈಯಿ ಇಂಡಿಯನ್ಸ್ ಇಂದ ಹೊರ ಬಿದ್ದಿರುವ ಸುದ್ದಿ ಗೆ ರೋಹಿತ್ ಶರ್ಮ ಅವರು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಮಹೇಲಾ ಜಯವರ್ದನೆ ಹೇಳಿಕೆ :

ಮುಂಬೈ ಇಂಡಿಯನ್ಸ್ ಪರ್ಫಾರ್ಮೆನ್ಸ್ ಹೆಡ್ ಮಹೇಲಾ ಜಯವರ್ದನೆ ಹೇಳಿಕೆ ನೀಡಿದ್ದಾರೆ “ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮುಂಬೈ ಇಂಡಿಯನ್ಸ್ ತತ್ವ ಶಾಸ್ತ್ರಕ್ಕೆ ಸತ್ಯವಾಗಿರುವುದು ಪರಂಪರೆಯ ಒಂದು ಭಾಗವಾಗಿದೆ.ಸಚಿನ್ ತೆಂಡೂಲ್ಕರ್ ಇಂದ ಹರ್ಭಜನ್ ಸಿಂಗ್ ಹಾಗು ರಿಕಿ ಪಾಂಟಿಂಗ್ ಇಂದ ರೋಹಿತ್ ಶರ್ಮಾ ರವರೆಗೆ ಅಸಾಧಾರಣ ನಾಯಕತ್ವದಿಂದ ಆಶಿರ್ವಾದ್ಸಲ್ಪಟ್ಟಿದೆ.ಇದೆ ಪರಂಪರೆಗೆ ಅನುಗುಣವಾಗಿ ೨೦೨೪ರ ಐಪಿಎಲ್ ಟೂರ್ನಿಯ ನಿಮಿತ್ತ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯಾ ಮುನ್ನೆಡೆಸಲಿದ್ದಾರೆ “,ಎಂದು ಹೇಳಿದ್ದಾರೆ.

ರೋಹಿತ್ ಶರ್ಮ ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ :

“ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ೨೦೧೩ ರಿಂದ ಮುಂಬೈ ಇಂಡಿಯನ್ಸ್ ನಾಯಕನಾಗಿ ಅವರ ಕೊಡುಗೆ ಅಪಾರವಾದುದು.ಅವರ ನಾಯಕ್ತ್ವವು ತಂಡಕ್ಕೆ ಅಪ್ರತಿಮ ಯಶಸ್ಸನ್ನು ತಂದುಕೊಟ್ಟಿದೆ.ಅವ್ರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅತ್ಯನ್ತಹ ಯಶಸ್ಸು ಮತ್ತು ಪ್ರೀತಿಪಾತ್ರ ತಂಡಗಳಲ್ಲಿ ಒಂದಾಗಿತ್ತು ಮುಂಬೈ ಇಂಡಿಯನ್ಸ್ ಅನ್ನು ಮತ್ತಷ್ಟು ಬಲಪಡಿಸಲು ಮೈದಾನದಲ್ಲಿ ಮತ್ತು ಹೊರಗೆ ಅವರ ಮಾರ್ಗದರ್ಶನ ಮತ್ತು ಅನುಭವವನ್ನು ನಾವು ಎದುರು ನೋಡುತ್ತೇವೆ”,ಎಂದು ಅವರು ಹೇಳಿದ್ದಾರೆ.

ಇದೆ ರೀತಿಯ ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡಲ್ಲೇ ತಿಳಿದುಕೊಳ್ಳಲು ನಮ್ಮ ಚಾನಲ್ ಗಳಿಗೆ ಜಾಯಿನ್ ಆಗಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *