ಭಾರತೀಯ ಅಂಚೆ ಇಲಾಖೆ ನೇಮಕಾತಿ 2024!Post office Recruitment 2024:

ಭಾರತೀಯ ಅಂಚೆ ಇಲಾಖೆ ನೇಮಕಾತಿ 2024!Post office Recruitment 2024:

India post office 2024: ಭಾರತೀಯ ಅಂಚೆ ಇಲಾಖಯಿಂದ ಅಧಿಕೃತ ನೋಟಿಫಿಕೇಶನ್ ಬಂದಿದೆ ಅದೇನೆಂದರೆ ಪೋಸ್ಟ್ ಮ್ಯಾನ್, ಎಂ ಟಿ ಎಸ್, ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್ ಹಾಗೂ ಮೇಲ್ ಗಾರ್ಡ್ ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಿಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೀಡಲಾಗಿದೆ ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ರೀತಿಯ ಎಲ್ಲಾ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

WhatsApp

Telegram

Instagram

Main Website

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಸಂಬಳ, ಬೇಕಾಗುವ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ಅರ್ಜಿ ಸಲ್ಲಿಸಲು ಇರುವ ಶುಲ್ಕ. ಮತ್ತು ಕೊನೆಯ ದಿನಾಂಕ ಈ ರೀತಿಯ ಎಲ್ಲಾ ಮುಖ್ಯ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ ಸಂಪೂರ್ಣವಾಗಿ ಓದಿ.

ಖಾಲಿ ಇರುವ ಹುದ್ದೆಗಳ ವಿವರಕೆಳಕಂಡಂತಿದೆ:

India post office 2024: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 1,899 ಹುದ್ದೆಗಳು. ಅದರಲ್ಲಿ ಯಾವ ಯಾವ ಹುದ್ದೆಗಳಿಗೆ ಎಷ್ಟು ಖಾಲಿ ಹುದ್ದೆಗಳು ಇದೆ ಎಂದು ಕೆಳಗೆ ನೀಡಲಾಗಿದೆ.

ಹುದ್ದೆಗಳ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ
ಪೋಸ್ಟಲ್ ಅಸಿಸ್ಟಂಟ್598
ಸಾರ್ಟಿಂಗ್ ಅಸಿಸ್ಟಂಟ್143
ಪೋಸ್ಟ್ ಮ್ಯಾನ್585
ಮೇಲ್ ಗಾರ್ಡ್03
ಮಲ್ಟಿ ಟಾಸ್ಕಿಂಗ್ ಸ್ಟಾಫ್ 570
ಒಟ್ಟು1,899

ವಯೋಮಿತಿ/Age limit:

ಭಾರತೀಯ ಅಂಚೆ ಇಲಾಖೆ (India post office) ಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಅಂದರೆ ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್ ಮ್ಯಾನ್, ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಇರಬೇಕು. ಭಾರತೀಯ ಅಂಚೆ ಇಲಾಖೆ ಅಧಿಕೃತ ಸೂಚನೆಯ ಪ್ರಕಾರ ಈ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ/Educational qualification:

ಹುದ್ದೆಯ ಹೆಸರುಶೈಕ್ಷಣಿಕ ಅರ್ಹತೆ
ಪೋಸ್ಟಲ್ ಅಸಿಸ್ಟಂಟ್ ಪದವಿ ಪೂರ್ಣಗೊಳಿಸಿರಿಬೇಕು
ಸಾರ್ಟಿಂಗ್ ಅಸಿಸ್ಟಂಟ್ಪದವಿ ಪೂರ್ಣಗೊಳಿಸಿರಿಬೇಕು
ಪೋಸ್ಟ್ ಮ್ಯಾನ್ 12ನೇ ತರಗತಿ ಪೂರ್ಣಗೊಳಿಸಿರಿಬೇಕು
ಮೇಲ್ ಗಾರ್ಡ್ 12ನೇ ತರಗತಿ ಪೂರ್ಣಗೊಳಿಸಿರಿಬೇಕು
ಮಲ್ಟಿ ಟಾಸ್ಕಿಂಗ್ ಸ್ಟಾಫ್10ನೇ ತರಗತಿ ಪೂರ್ಣಗೊಳಿಸಿರಿಬೇಕು

ಸಂಬಳ/salary:

ಭಾರತೀಯ ಅಂಚೆ ಇಲಾಖೆ ಅಧಿಕೃತ ಸೂಚನೆಯ ಪ್ರಕಾರ ಸಂಬಳ ಹುದ್ದೆಗಳಿಗೆ ಅನುಗುಣವಾಗಿ ಇರುತ್ತದೆ. ಕನಿಷ್ಠ 18,000 ರೂ ಇಂದ 81,100 ರೂ ಗಳು ಇರುತ್ತದೆ.

  • ಪೋಸ್ಟಲ್ ಅಸಿಸ್ಟಂಟ್ ಮತ್ತು ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗಳಿಗೆ ತಿಂಗಳಿಗೆ ಕನಿಷ್ಠ 25,000 ರಿಂದ 81,100 ರೂಪಾಯಿಗಳು ಇರುತ್ತವೆ.
  • ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ತಿಂಗಳಿಗೆ ಕನಿಷ್ಠ 21,700 ರಿಂದ 69,100 ರೂಪಾಯಿಗಳು ಇರುತ್ತವೆ.
  • ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ತಿಂಗಳಿಗೆ 18,000 ರಿಂದ 56,900 ರೂಪಾಯಿ ಇರುತ್ತವೆ.
  • ಈ ರೀತಿಯಾಗಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳಿಗೆ ಸಂಬಳ ನೀಡುತ್ತಾರೆ.

ಬೇಕಾಗುವ ದಾಖಲೆಗಳು/Documents:

ಭಾರತೀಯ ಅಂಚೆ ಇಲಾಖೆ (India post office) ಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ದಾಖಲೆಗಳನ್ನು ಒದಗಿಸಬೇಕು. ಯಾವುದು ಎಂದರೆ,

  • 10ನೇ ತರಗತಿ ಅಂಕಪಟ್ಟಿ
  • 12ನೇ ತರಗತಿ ಅಂಕಪಟ್ಟಿ
  • ಪದವಿದರ ಅಂಕಪಟ್ಟಿ
  • ಜನ್ಮ ದಿನಾಂಕ ದಾಖಲೆ
  • ಕಂಪ್ಯೂಟರ್ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಸಹಿ
  • ಅಂಗವೈಕಲ್ಯ ಪ್ರಮಾಣ ಪತ್ರ (ಅಂಗವಿಕಲ ಅಭ್ಯರ್ಥಿ ಆಗಿದ್ದರೆ ಮಾತ್ರ)

ಅಂಕ ಪಟ್ಟಿ ಗಳು ಯಾವ ಹುದ್ದೆಗಳಿಗೆ ಯಾವ ಶೈಕ್ಷಣಿಕ ಅರ್ಹತೆ ಇರುವುದು ಆ ಅಂಕಪಟ್ಟಿ ಅನ್ನು ಒದಗಿಸಬೇಕು. ಅಂದರೆ ಪೋಸ್ಟಲ್ ಮತ್ತು ಸಾರ್ಟಿಂಗ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಮತ್ತು 12ನೇ ತರಗತಿ ಹಾಗೂ ಪದವಿ ಅಂಕಪಟ್ಟಿ ಅನ್ನು ಒದಗಿಸಬೇಕು. ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಮತ್ತು 12ನೇ ತರಗತಿ ಅಂಕಪಟ್ಟಿ ಅನ್ನು ಒದಗಿಸಬೇಕು. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಕೇವಲ 10ನೇ ತರಗತಿ ಅಂಕಪಟ್ಟಿ ಅನ್ನು ಒದಗಿಸಬೇಕು.

SBI ನಿಂದ ಜೂ. ಅಸೋಸಿಯೇಟ್ ಹುದ್ದೆಗಳ ಬೃಹತ್ ಭರ್ತಿ (8424) : ಪರೀಕ್ಷೆಯು ಕನ್ನಡದಲ್ಲೆ ಇರುತ್ತದೆ. SBI JA 8424 Vacancies! ಈಗಲೇ ಅರ್ಜಿ ಸಲ್ಲಿಸಿ!.

ಅರ್ಜಿ ಅನ್ನು ಸಲ್ಲಿಸುವ ಮತ್ತು ಆಯ್ಕೆ ಮಾಡುವ ವಿಧಾನ:

ಅರ್ಜಿ ಸಲ್ಲಿಸುವ ವಿಧಾನ:

India post office 2024:ಭಾರತೀಯ ಅಂಚೆ ಇಲಾಖೆ ಅಧಿಕೃತ ಸೂಚನೆಯ ಪ್ರಕಾರ ಅರ್ಜಿ ಅನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

ಆಯ್ಕೆ ಮಾಡುವ ವಿಧಾನ:

  • ಮೆರಿಟ್ ಲಿಸ್ಟ್
  • ಮೆಡಿಕಲ್ ಟೆಸ್ಟ್
  • ದಾಖಲೆಗಳ ಪರಿಶೀಲನೆ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಇರುವ ಶುಲ್ಕ/application Fees:

India post office 2024:ಭಾರತೀಯ ಅಂಚೆ ಇಲಾಖೆ (india post office) ಯ ಅಧಿಕೃತ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಶುಲ್ಕ ಕೆಳಗಿನಂತಿದೆ.

ಎಸ್.ಸಿ/ಎಸ್.ಟಿ/ಅಂಗವಿಕಲ/ಮಾಜಿ ಸೈನಿಕ/ಮಹಿಳಾ/ತೃತೀಯ ಲಿಂಗ ಅಭ್ಯರ್ಥಿಗಳಿಗೆಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 100 ರೂಪಾಯಿಗಳು ಇರುತ್ತವೆ.

ಕೊನೆಯ ದಿನಾಂಕ/last Date:

ಭಾರತೀಯ ಅಂಚೆ ಇಲಾಖೆ (India post office) ಯ ಅಧಿಕೃತ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 9 ,2023 ರಂದು ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಇರುವ ಕೊನೆಯ ದಿನಾಂಕ. ಆದ್ದರಿಂದ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ.

ಇದೇ ರೀತಿಯ ಎಲ್ಲಾ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಪ್ರಮುಖ ಲಿಂಕ್ ಗಳು:

WhatsApp

Telegram

Instagram

Main website

Leave a Reply

Your email address will not be published. Required fields are marked *