HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24:70,000/- ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24:70,000/- ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24: ಆರ್ಥಿಕ ಸಮಸ್ಯದಿಂದಾಗಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸರ್ಕಾರದಿಂದಲೇ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷವೂ ನೀಡುತ್ತಿದ್ದಾರೆ. ಆದರೂ ಎಷ್ಟೋ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯ ಇರುವ ಕಾರಣ, ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಓದನ್ನು ಮುಂದುವರಿಸಲು ಹಲವಾರು ಖಾಸಗಿ ಸಂಸ್ಥೆಗಳು ವಿಧ್ಯಾರ್ಥಿ ವೇತನವನ್ನು ನೀಡುತ್ತವೆ. ಇಂತಹ ಸಂಸ್ಥೆಗಳ ಪೈಕಿ HDFC ಬ್ಯಾಂಕ್ ಸಂಸ್ಥೆ ಕೂಡ ಒಂದು ಆಗಿದೆ. ಪ್ರತಿವರ್ಷವೂ ಇದೆ ರೀತಿ ವಿಧ್ಯಾರ್ಥಿ ವೇತನ ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಾರೆ. ಅದರಂತೆಯೇ ಈ ವರ್ಷವೂ ಅಂದರೆ 2023-24ನೇ ಸಾಲಿನಲ್ಲಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ಎಲ್ಲಾ ವಿವರಗಳನ್ನು ಕೆಳಗೆ ನೀಡಲಾಗಿದೆ ಸಂಪೂರ್ಣವಾಗಿ ಓದಿ ಮತ್ತು ಈಗಲೇ ಅರ್ಜಿ ಸಲ್ಲಿಸಿ .

ಪ್ರಮುಖ ಲಿಂಕ್ ಗಳು :

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

HDFC ಬ್ಯಾಂಕ್ ಪರಿವರ್ತನಾ ECSS 2023-24 ಇದರ ಮೂಲ ಉದ್ದೇಶ:

ಬಡ ಕುಟುಂಬದ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯ ಇರುವ ಕಾರಣ ಅಂತಹ ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಈ ವಿಧ್ಯಾರ್ಥಿ ವೇತನವನ್ನು ನೀಡುತ್ತವೆ. ಇದರಿಂದ ಎಷ್ಟೋ ಬಡ ಕುಟುಂಬದ ವಿಧ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಹಾಯವಾಗುತ್ತದೆ. ಹಾಗಿದ್ದರೆ ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರು ಯಾರು ಅರ್ಜಿ ಸಲ್ಲಿಸಬಹುದು ಮತ್ತು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಈ ಎಲ್ಲಾ ವಿವರಗಳನ್ನು ಕೆಳಗೆ ನೀಡಲಾಗಿದೆ.

HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24 : ಯಾರು ಯಾರು ಅರ್ಜಿ ಸಲ್ಲಿಸಬಹುದು?

HDFC ವಿದ್ಯಾರ್ಥಿ ವೇತನ 2023-24 ಇದ್ದಕ್ಕೆ ಯಾರು ಯಾರು ಅರ್ಜಿ ಸಲ್ಲಿಸಬಹುದು ಎಂದರೆ 1ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿಧ್ಯಾರ್ಥಿಗಳು, ಐ ಟಿ ಐ, ಡಿಪ್ಲೊಮೊ, ಪದವಿ ವಿಧ್ಯಾರ್ಥಿಗಳು, ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಹಾಗಾದರೆ ಯಾವ ವಿದ್ಯಾರ್ಥಿಗಳಿಗೆ ಎಷ್ಟ್ ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತದೆ ಎಂದು ಸಂಪೂರ್ಣವಾಗಿ ಕೆಳಗೆ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ.

ಯಾರು ಯಾರಿಗೆ ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತದೆ?

ಶಾಲಾ ವಿದ್ಯಾರ್ಥಿಗಳಿಗೆ ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತದೆ:

  • 1ನೇ ತರಗತಿಯಿಂದ 6ನೇ ತರಗತಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ₹15,000/- ಸಿಗುತ್ತದೆ.
  • 7ನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ₹18,000/- ಸಿಗುತ್ತದೆ.

ಮುಖ್ಯ ಮಾಹಿತಿ : HDFC ವಿಧ್ಯಾರ್ಥಿ ವೇತನ 2023-24 ಅರ್ಜಿ ಸಲ್ಲಿಸುವ ಶಾಲಾ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ವಿಧ್ಯಾಭ್ಯಾಸದಲ್ಲಿ ಶೇಕಡ 55% ಮೇಲೆ ಇರತಕ್ಕದ್ದು. ಮತ್ತು ಕುಟುಂಬದ ವಾರ್ಷಿಕ ಆದಾಯ ₹ 2.5 ಲಕ್ಷದ ಒಳಗೆ ಇರಬೇಕು. ಇಂತಹ ವಿಧ್ಯಾರ್ಥಿಗಳು ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ.

ಪದವಿ ವಿದ್ಯಾರ್ಥಿಗಳಿಗೆ ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತದೆ:

ಇದು ಕಾಲೇಜ್ ಗೆ ಹೋಗಲು ಮತ್ತು ವಾಣಿಜ್ಯ,ವಿಜ್ಞಾನ ಮತ್ತು ಕಲೆ, ಕಂಪ್ಯೂಟರ್ ವಿಜ್ಞಾನ ಅಥವಾ ಇಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ , ನರ್ಸಿಂಗ್ ನಂತಹ ಇತರ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳೂ ಕೂಡ ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

  • ನೀವು ಇಂಜಿನಿಯರಿಂಗ್ (Engineering) , ವೈದ್ಯಕೀಯ (medical), ವಕೀಲರು (Lawyer) ಇಂತಹ ಕೋರ್ಸ್ ಓದುತ್ತಿರುವ ವಿಧ್ಯಾರ್ಥಿಗಳಿಗೆ ₹50,000/- ಸಿಗುತ್ತದೆ.
  • ಆದರೆ ನೀವು ಇತಿಹಾಸ,ಮತ್ತು ಇಂಗ್ಲೀಷ್ ನಂತಹ ಬೇರೆದನ್ನು ಓದುತ್ತಿದ್ದರೆ ನಿಮಗೆ ಪ್ರತಿವರ್ಷ ₹30,000/- ಸಿಗುತ್ತದೆ.

ಮುಖ್ಯ ಮಾಹಿತಿ: HDFC ವಿಧ್ಯಾರ್ಥಿ ವೇತನ 2023-24 ಅರ್ಜಿ ಸಲ್ಲಿಸಲು ಪದವಿ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ವಿಧ್ಯಾಭ್ಯಾಸ ಅಂಕವು ಶೇಕಡ 55% ಮೆಲ್ಪಟ್ಟಿರ ಬೇಕು ಮತ್ತು ತಮ್ಮ ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷದ ಒಳಗೆ ಇರಬೇಕು. ಇಂತಹ ವಿಧ್ಯಾರ್ಥಿಗಳು ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತದೆ:

ನೀವು ಅರ್ಜಿ ಸಲ್ಲಿಸಲು ನೀವು, ವಿಜ್ಞಾನ , ಕಲೆ ತಂತ್ರಜ್ಞಾನ ಅಥವಾ ವ್ಯವಹರದಂತಹ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುತ್ತಿರುವವರು ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

  • ಎಂಎಸ್ ಸಿ (Msc) ಮತ್ತು ಎಂಎ (MA) ಹಾಗೂ ಎಂಕಾಮ್ (Mcom) ಅಧ್ಯಾನ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ₹35,000/- ಸಿಗುತ್ತದೆ.
  • ಎಂ ಟೆಕ್ (MTech) ಮತ್ತು ಎಂ ಬಿ ಎ (MBA) ನಂತಹ ಕೋರ್ಸ್ಗಳನ್ನೂ ಓದುತ್ತಿರುವ ವಿಧ್ಯಾರ್ಥಿಗಳಿಗೆ 75,000/- ಸಿಗುತ್ತದೆ.

ಮುಖ್ಯ ಮಾಹಿತಿ: HDFC ವಿಧ್ಯಾರ್ಥಿ ವೇತನ 2023:24 ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ಹಿಂದಿನ ವರ್ಷದ ವಿಧ್ಯಾಭ್ಯಾಸ ಆಂಕವು ಶೇಕಡ 55% ಮೇಲ್ಪಟ್ಟಿರಬೇಕು. ತಮ್ಮ ಕುಟುಂಬದ ಆದಾಯ ₹2.5 ಲಕ್ಷದ ಒಳಗೆ ಇರಬೇಕು. ಇಂತಹ ವಿದ್ಯಾರ್ಥಿಗಳು ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪ್ರಮುಖ ಮಾಹಿತಿ : ಕೇವಲ ₹10/- ಇಂದ ಪ್ರತೀದಿನ ₹3000/- ಹಣವನ್ನು ಗಳಿಸಬಹುದು ! ಇಲ್ಲದೇ ಸಂಪೂರ್ಣ ಮಾಹಿತಿ!

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:

HDFC ವಿಧ್ಯಾರ್ಥಿ ವೇತನ 2023-24 ಕ್ಕೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಬೇಕಾಗಿವೆ ಅವುಗಳೆಂದರೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ್.
  • ಬ್ಯಾಂಕ್ ಪಾಸ್ ಬುಕ್.
  • ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ.
  • ವಿದ್ಯಾರ್ಥಿಯ ಭಾವಚಿತ್ರ (ಪಾಸ್ಪೋರ್ಟ್ ಸೈಜ್).
  • ಹಿಂದಿನ ವರ್ಷದ ಅಂಕಪಟ್ಟಿ.
  • ಶಾಲೆ ಅಥವಾ ಕಾಲೇಜ್ ಐ ಡಿ ಕಾರ್ಡ್.
  • ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಅಥವಾ ಕಾಲೇಜ್ ನೋಂದಣಿ ರಶೀದಿ.
  • ಹೀಗೆ ಇದೆ ರೀತಿ ಇನ್ನೂ ಕೆಲವು ದಾಖಲಾತಿಗಳನ್ನು ಅಗತ್ಯವಿದ್ದರೆ ನಮೂದಿಸ ತಕ್ಕದ್ದು.

ಅರ್ಜಿ ಸಲ್ಲಿಸುವುದು ಹೇಗೆ?

HDFC ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ಕೆಳಗೆ ನೀಡಿರುವ “Apply NoW” ಲಿಂಕ್ ಮೇಲೆ ಕ್ಲಿಕ್ ಮಾಡಿ . ಹಾಗು ಮೇಲೆ ನೀಡಿರುವ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಮೇಲೆ ನೀಡಿರುವಂತಹ ದಾಖಲೆಗಳನ್ನು ನೀಡಿ ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : Apply Now

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ?

HDFC ವಿಧ್ಯಾರ್ಥಿ ವೇತನ 2023-24 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ -31-2023 ಆದ್ದರಿಂದ ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿಯನ್ನು ಈಗಲೇ ಸಲ್ಲಿಸಿ.

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ವಂದನೆಗಳೊಂದಿಗೆ

One thought on “HDFC ಪರಿವರ್ತನಾ ವಿಧ್ಯಾರ್ಥಿ ವೇತನ 2023-24:70,000/- ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

Leave a Reply

Your email address will not be published. Required fields are marked *