CWC 2023: ಸೆಮಿಫೈನಲ್ ಅಲ್ಲಿ ಭಾರತದ ಆಟಗಾರರ ಸಾಲು ಸಾಲು ದಾಖಲೆಗಳು! ಉಡೀಸ್!?

CWC 2023: ಸೆಮಿಫೈನಲ್ ಅಲ್ಲಿ ಭಾರತದ ಆಟಗಾರರ ಸಾಲು ಸಾಲು ದಾಖಲೆಗಳು! ಉಡೀಸ್!?

CWC semifinal 2023: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಏಕದಿನ ಕ್ರಿಕೇಟ್ ವಿಶ್ವ ಕಪ್ ಸೆಮಿಪೈನಲ್ ಭಾರತದ ಆಟಗಾರರ ಒಳ್ಳೆಯ ಪ್ರದರ್ಶನ ಮತ್ತು ಭಾರತದ ಆಟಗಾರರಿಂದ ಸಾಲು ಸಾಲು ದಾಖಲೆಗಳು ಸೃಷ್ಟಿಯಾದವು. ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿ ಕ್ರಿಕೇಟ್ ವಿಶ್ವ ಕಪ್ ಫೈನಲ್ ಗೆ ಭಾರತ ತಂಡವು ಹೆಜ್ಜೆ ಇಟ್ಟಿದೆ. ಹಾಗು ಭಾರತದ ಆಟಗಾರರಿಂದ ಸಾಲು ಸಾಲು ದಾಖಲೆಗಳು ಸೃಷ್ಟಿಯಾದವು.ಇದರ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೆ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಮತ್ತು ಇನ್ನೂ ಅನೇಕ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು. ಹಾಗಾಗಿ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

Whatsap

Telegram

Instagram

Website Home

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆದ ಸೆಮಿಫೈನಲ್! :

CWC semifinal 2023: ಏಕದಿನ ಕ್ರಿಕೆಟ್ ವಿಶ್ವ ಕಪ್ 15/11/2023 ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಸೆಮಿಫೈನಲ್ ಪಂದ್ಯವು ನಡೆಯಿತು. ಮೊದಲಿಗೆ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಅನ್ನು ಆಯ್ಕೆ ಮಾಡಿದರು. ಹಾಗಾಗಿ ನ್ಯೂಜಿಲೆಂಡ್ ಮೊದಲಿಗೆ ಬೌಲಿಂಗ್ ಮಾಡಬೇಕಾಯಿತು. ಭಾರತ ತಂಡದ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ಲ್ ಅವರು ಪವರ್ ಪ್ಲೇ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದರು. ರೋಹಿತ್ ಶರ್ಮಾ ಅವರು 47 ರನ್ ಬಾರಿಸಿ ಔಟ್ ಆದರು. ಬಳಿಕ ಫೀಲ್ಡ್ ಗೆ ಬಂದ ಕಿಂಗ್ ಕೊಹ್ಲಿ (ವಿರಾಟ್ ಕೊಹ್ಲಿ) ಅವರಿಂದ ಆಕರ್ಷಕ ಶತಕ(117) ಸಿಡಿಸಿ ತಂಡದ ರನ್ ಹೆಚ್ಚಲು ಕಾರಣವಾಗಿದೆ. ಶುಭ್ಮನ್ ಗಿಲ್ಲ್(80 ರನ್) ಅವರಿಗೆ ಏಟದ ಕಾರಣ ಬದಲಾಗಿ ಶ್ರೇಯಸ್ ಐಯ್ಯರ್ ಅವರು ಫೀಲ್ಡ್ ಗೆ ಬಂದು 105 ರನ್ ಶತಕ ಸಿಡಿಸಿದರು.ಇವರ ಈ ಬ್ಯಾಟಿಂಗ್ ಇಂದ ಭಾರತ ತಂಡವು ನ್ಯೂಜಿಲೆಂಡ್ ತಂಡಗೆ 398 ರನ್ ಗಳ ಗುರಿ ನೀಡಿತು.

ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಆಟಗಾರರಾದ ರಚಿನ್ ರವೀಂದ್ರ(13) ಮತ್ತು ಕಾನ್ವೆ(13) ರನ್ ಗಳಿಗೆ ವಿಕೆಟ್ ಪಡೆದ ಶಮಿ. ಆರಂಭದಲ್ಲೇ ನ್ಯೂಜಿಲೆಂಡ್ ಗೆ ನಡುಕ ಹುಟ್ಟಿಸಿದರು. ನಂತರ ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್ ಮತ್ತು ಡೆಲ್ಲಿ ಮಿಚ್ಚಲ್ ಅವರ ಆಕರ್ಷಕ ಜೊತೆ ಆಟದಿಂದ ನ್ಯೂಜಿಲೆಂಡ್ ತಂಡ ಗೆಲುವಿನತ್ತ ಸಾಗುತ್ತಿತ್ತು ಆದರೆ ಶಮಿ ಬೌಲಿಂಗ್ ಗೆ ಇಬ್ಬರ ಜೊತೆ ಆಟ ಕುಸಿದು ವಿಲಿಯಮ್ಸನ್ 69 ರನ್ ಗೆ ಔಟ್. ಮತ್ತು ಫಿಲಿಪ್ಸ್ ನಿಂದ ಆಕರ್ಷಕ 41 ರನ್ ಬಂದವು ಬೂಮ್ರ ಬೌಲಿಂಗ್ ಗೆ ಔಟ್. ಮಿಚ್ಚಲ್ ತಮ್ಮ ಆಕರ್ಷಕ ಪ್ರದರ್ಶನ ನೀಡಿ ಶತಕ ಸಿಡಿಸಿದ್ದಾರೆ (134). ಮತ್ತೆ ಶಮಿಯ ಬೌಲಿಂಗ್ ಗೆ ವಿಕೇಟ್ ನೀಡಿದರು. ನಂತರ ಬಂದ ಆಟಗಾರರ ಪೈಕಿ ಬೌಲಿಂಗ್ ಅಲ್ಲಿ ಒಟ್ಟಾರೆ ಶಮಿ ಗೆ 7 ವಿಕೆಟ್ ಪಡೆದರು. ಬೂಮ್ರ , ಸಿರಾಜ್ ಮತ್ತು ಕಲ್ದೀಪ್ ಯಾದವ್ ಅವರು ತಲಾ ಒಂದು ವಿಕೆಟ್ ಗಳ್ನನು ಪಡೆದು ನ್ಯೂಜಿಲೆಂಡ್ ತಂಡ ವನ್ನು 327 ರನ್ ಗಳಿಗೆ ಆಲ್ ಔಟ್ ಮಾಡಿದರು. ಹೀಗಾಗಿ ಭಾರತಕ್ಕೆ 70 ರನ್ ಗಳ ಭರ್ಜರಿ ಜಯದ ಮೂಲಕ ಫೈನಲ್ಸ್ ಗೆ ಹೆಜ್ಜೆ ಇಟ್ಟಿದ್ದಾರೆ. ಪಂದ್ಯ ಶ್ರೇಷ್ಠ ಮಹೊಮ್ಮದ್ ಶಮಿ ಮತ್ತು ಮುಖ್ಯ ವಿಷಯ ಅಂದರೆ ನಮ್ಮ ಭಾರತದ ಆಟಗಾರರು ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆಗಳನ್ನು ಮಾಡಿರುವುದು ಏನು ತಿಳಿಯೋಣ. ಸಂಪೂರ್ಣವಾಗಿ ಓದಿ.

ಭಾರತದ ಆಟಗಾರರಿಂದ ಸಾಲು ಸಾಲು ದಾಖಲೆಗಳು!:

ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡದ ನಡುವೆ ನಡೆದ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಾಖಲೆಗಳನ್ನು ಮಾಡಿರುವುದು ನಮ್ಮ ಭಾರತದ ಆಟಗಾರರು. ಮೊದಲಿಗೆ ವಿರಾಟ್ ಕೊಹ್ಲಿ (117) ಶತಕ ಸಿಡಿಸಿದರು. ಕ್ರಿಕೇಟ್ ದಿಗ್ಗಜ ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೇಟ್ ನಲ್ಲಿ 49 ಶತಕಗಳನ್ನು ಹೊಡೆದು ಅಗ್ರ ಸ್ಥಾನ ಪಡೆದಿದ್ದರು. ಆದರೆ ಇದೀಗ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ಒಟ್ಟಾರೆ 50 ಶತಕಗಳನ್ನು ಹೊಡೆದು ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆ ಮುರಿದು ತಮ್ಮ ದಾಖಲೆಯನ್ನು ಅತಿ ಕಡಿಮೆ ಇನ್ನಿಂಗ್ಸ್ ಅಲ್ಲೇ ಹೊಡೆದಿದ್ದಾರೆ. ಹಾಗು ವಿಶ್ವದಲ್ಲೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ಶತಕ ಹೊಡೆದ ಆಟಗಾರ ಎಂಬ ದಾಖಲೆಯನ್ನು ನಿಮಿರ್ಸಿದ್ದಾರೆ. ಮತ್ತು ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಕೇವಲ ಒಂದು ಸರಣಿ ಯಲ್ಲಿ (711) ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ಹೊಸ ದಾಖಲೆಯನ್ನು ನಿರ್ಮಿಸಿದರು. ಮತ್ತು ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಒಂದು ಸರಣಿಯಲ್ಲಿ ಅತಿ ಹೆಚ್ಚು ಅರ್ಧ ಶತಕಗಳು (8) ಹೊಡೆದಿರುವ ಏಕೈಕ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು.ಮತ್ತು ಒಟ್ಟಾರೆ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್(13,749) ಗಳಿಸಿದ ಆಟಗಾರರಲ್ಲಿ 3ನೇ ಸ್ಥಾನ ಪಡೆದಿದ್ದಾರೆ.

ರೋಹಿತ್ ಶರ್ಮಾ ಅವರು ಇದೀಗ ಅವರ ಖಾತೆಗೆ ದಾಖಲೆಯನ್ನು ಸೇರಿಸಿಕೊಂಡಿದ್ದಾರೆ. ಅದು ಏನೆಂದರೆ ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಅತೀ ಹೆಚ್ಚು ಸಿಕ್ಸರ್(51) ಹೊಡೆದಿರುವ ಮೊದಲ ಆಟಗಾರರಾಗಿ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.ಮತ್ತು ಒಂದೇ ಸರಣಿಯ ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ. ಮತ್ತು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ.ಮತ್ತು ಆ ಪಂದ್ಯದ ಪಂದ್ಯ ಶ್ರೇಷ್ಠ ಕೂಡ ಮೊಹಮ್ಮದ್ ಶಮಿ ಪಾಲಾಯಿತು.ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ ವಿಶ್ವ ಕಪ್ 2023 ರ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗರಾರಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಇನ್ನೂ ಫೈನಲ್ ಬಾಕಿ ಇದ್ದು ಅದಾದ ನಂತರ ತಿಳಿಯುವುದು ಯಾರು ಅತಿ ಹೆಚ್ಚು ವಿಕೆಟ್ ಪಡೆದರು ಎಂದು. ಸದ್ಯಕ್ಕೆ ಮೊದಲ ಸ್ಥಾನದಲ್ಲಿ ಇರುವುದು ಶಮಿ. ಹಾಗು ಏಕದಿನ ಕ್ರಿಕೆಟ್ ನಲ್ಲಿ ಒಂದೇ ಪಂದ್ಯ ದಲ್ಲೀ 7 ವಿಕೇಟ್ ಅನ್ನು ಪಡೆದ ಮೊದಲ ಭಾರತೀಯ. ಮತ್ತು ಅತೀ ವೇಗವಾಗಿ ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ 50 ವಿಕೇಟ್ ಪಡೆದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದು ಕೇವಲ ಸೆಮಿಫೈನಲ್ ಅಲ್ಲಿ ನಡೆದ ನಂತರ ಆಗಿರುವ ದಾಖಲೆಗಳು.

ಇದೆ ರೀತಿ ಎಲ್ಲಾ ವಿಭಾಗದಲ್ಲೂ ಎಲ್ಲಾ ಭಾರತೀಯರು ದಾಖಲೆಗಳನ್ನು ಮಾಡಲಿ ಮತ್ತು 2023 ರ ಏಕದಿನ ಕ್ರಿಕೆಟ್ ವಿಶ್ವ ಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಜಯಶಾಲಿ ಆಗಲಿ ಎಂದೂ ಆಶಿಸೋಣ.

ಇದೆ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಮತ್ತು ಇನ್ನೂ ಅನೇಕ ರೀತಿಯಲ್ಲಿ ಎಲ್ಲಾ ವಿಚಾರಗಳನ್ನೂ ಕನ್ನಡದಲ್ಲೆ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ವಂದನೆಗಳು

Leave a Reply

Your email address will not be published. Required fields are marked *