8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನು ಕೇವಲ ನೆನಪು ಮಾತ್ರ !?ಅರ್ಜುನನನಿಗೆ ಏನಾಯಿತು ? ಇಲ್ಲಿದೆ ನೋಡಿ

8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನು ಕೇವಲ ನೆನಪು ಮಾತ್ರ !?ಅರ್ಜುನನನಿಗೆ ಏನಾಯಿತು ? ಇಲ್ಲಿದೆ ನೋಡಿ

ಅರ್ಜುನ ಆನೆ ಸಾವು:ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನು ಬರೋಬ್ಬರಿ 8 ಬಾರಿ ಹೊತ್ತಿದ್ದ ಅರ್ಜುನ ಆನೆ (63 ವರ್ಷ ) ಮೃತ ಪಟ್ಟಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಡೆದ ದುರ್ಘಟನೆ ಯಿಂದ ಅರ್ಜುನ ಆನೆ ಸಾವನ್ನಪಿದೆ.ಅರ್ಜುನನಿಗೆ ಏನಾಯಿತು ಹೀಗೆ ದುರ್ಘಟನೆ ಸಂಭವಿಸಿತು ಈ ಎಲ್ಲ ವಿಷಯವನ್ನು ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಹಾಸನ ಜಿಲ್ಲೆ ಯಲ್ಲಿ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು ಕಾಡಾನೆಗಳಿಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡುವ ವೇಳೆ ಕಾಡಾನೆಯದ ಒಂಟಿ ಸಲಗ ಮತ್ತು ಅರ್ಜುನ ಈ ಆನೆಗಳ ನಡುವೆ ನಡೆದ ಜಗಳದಿಂದ ಅರ್ಜುನ ಆನೆಯು ಮೃತಪಟ್ಟಿದೆ.

ಜನರ ಪ್ರೀತಿಪಾತ್ರ ಆಗಿದ್ದ ಅರ್ಜುನ ಆನೆಯ ಕಿರು ಪರಿಚಯ :

ಅರ್ಜುನ ಆನೆಯು 1960 ರಲ್ಲಿ ಜನಿಸಿತ್ತು.1968 ರಲ್ಲಿ ಕರ್ನಾಟಕದ ಪಶಿಮ ಘಟ್ಟಗಳ ಕಾಕನಕೋಟೆಯ ಕಾಡಿನಿಂದ ಖೆಡ್ದಾ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ತರಲಾಗಿತ್ತು. ಆ ಆನೇ ಪಳಗಿದ ನಂತರ 1990 ದಶಕದಲ್ಲಿ ಮೈಸೂರಿನಲ್ಲಿ ದಸರಾ ಸಮಯದಲ್ಲಿ ಮೆರವಣಿಗೆಯನ್ನು ಒಳಗೊಂಡು ಶಿಬಿರಗಳಲ್ಲಿ ಭಾಗಸ್ವಾಹಿಸಲು ಅವಕಾಶ ನೀಡಲಾಯಿತು. ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿಯನ್ನು ಹೊರುತಿದ್ದ ದ್ರೋಣ , ಬಲರಾಮ , ಆನೆಗಳು ಅನಾರೋಗಕ್ಕೆ ಒಳಗಾದ ನಂತರ ದಸರಾ ಉತ್ಸವದಲ್ಲಿ ಅಂಬಾರಿಯನ್ನು ಅರ್ಜುನ ಆನೆಯು ಹೊರಲು ಆರಂಬಿಸಿತು. ಅಲ್ಲಿಂದ ಬರೋಬ್ಬರಿ 8 ವರ್ಷಗಳ ಕಾಲ ಅಂದರೆ 2012 ರಿಂದ 2019 ರ ವರೆಗೆ ಅರ್ಜುನ ಆನೆಯು ಅಂಬಾರಿ ಅನ್ನು ಹೊತ್ತಿದೆ.

ತೂಕದಲ್ಲಿ ಅರ್ಜುನ ಆನೆಯು ನಂಬರ್ 1. ಮೈಸೂರು ದಸರಾ ಜಂಬೂಸವಾರಿಯ ಆನೆಗಳ ತೂಕದಲ್ಲಿ ಅರ್ಜುನನೇ ಎಲ್ಲ ಆನೆಗಳಿಗಿಂತ ಹೆಚ್ಚು ತೂಕವನ್ನು ಹೊಂದಿರುವ ಆನೆ. ಬರೋಬ್ಬರಿ 5600 ಕೆ.ಜಿ ತೂಕವನ್ನು ಹೊಂದಿತ್ತು.ಸಾಕಷ್ಟು ಧೈರ್ಯ ಮತ್ತು ಬಲಶಾಲಿ ಆಗಿದ್ದ ಅರ್ಜುನ ಆನೆ ಯನ್ನು ಅರಂತ್ಯ ಇಲಾಖೆಯ ಕಾರ್ಯಾಚರಣೆಗಳಿಗೆ ಕರೆದೊಯ್ಯುತಿದ್ದರು.ಸಾಕಷ್ಟು ಪುಂಡಾನೆಗಳು ಹಾಗು ಕಾಡಾನೆಗಕ್ಳನ್ನು ಅರ್ಜುನ ಆನೆಯು ಸೆರೆ ಹಿಡಿಯಲು ನೆರವಾಗುತಿತ್ತು.

ಐತಿಹಾಸಿಕ ಮೈಸೂರು ದಸರಾ ಉತ್ಸವದಲ್ಲಿ 750 ಕೆ ಜಿ ತೂಕದ ಚಿನ್ನದ ಅಂಬಾರಿಯನ್ನು ಸತತ ಬರೋಬ್ಬರಿ 8 ಬಾರಿ ಹೊತ್ತಿರುವ ಅರ್ಜುನ ಜನರ ಪ್ರೀತಿ ಗಳಿಸಿತು. ನಂತರ ಸರ್ಕಾರದ ಆದೇಶದ ಮೇರೆಗೆ 60 ವರ್ಷ ಮೇಲ್ಪಟ್ಟ ಆನೆಯಿಂದ ಅಂಬಾರಿಯನ್ನು ಹೊರಿಸಬಾರದೆಂದು ಹೇಳಿದ್ದ ಕಾರಣದಿಂದ ಅರ್ಜುನನ ನಂತರ ಅಭಿಮನ್ಯು ಅಂಬಾರಿಯನ್ನು ಹೊರುತ್ತಿದೆ.

ಮದಗಜಗಳ ಕಾದಾಟದಲ್ಲಿ ಅರ್ಜುನನ ಸಾವು :

ಅರ್ಜುನ ಆನೆ ಸಾವು: ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ಆರಂಭಿಸಿದ್ದು ನಿರಂತರವಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.ಇದಾರೆ ವೇಳೆ 24 ಡಿಸೇಂಬೆರ್ 2023 ಸೋಮವಾರದಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರಿನಲ್ಲಿ ಕಾಡಾನೆಯಾದ ಒಂಟಿಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು 4 ಆನೆಗಳನ್ನು ಕರೆದೊಯ್ದಿದ್ದರು.ಒಂಟಿಸಲಾಗವನ್ನು ಸೆರೆ ಹಿಡಿಯಲು ಹೋಗಿದ್ದ ನಾಲ್ಕು ಆನೆಗಳು ಒಂಟಿಸಲಗದ ಪುಂಡಾಟಿಕೆಯಿಂದ ಆನೆಗಳ ನಡುವೆ ಗುದ್ದಾಟ ನಡೆದಿದ್ದು.ನಾಲ್ಕು ಆನೆಗಳ ಪೈಕಿ ಮುರು ಆನೆ ಗಳು ಓಡಿ ಹೋದವು ಆದರೆ ಅರ್ಜುನ ಆನೆಯು ಒಂಟಿ ಸಲಗದೊಂದಿಗೆ ಏಕಾಂಗಿಯಾಗಿ ಹೋರಾಡಲು ಮುಂದಾಗಿದ್ದು.ಎರಡು ಆನೆಗಳ ನಡುವೆ ಗುದ್ದಾಟವು ಹೆಚ್ಚಾದಾಗ ಅರ್ಜುನ ಆನೆಯ ಮಾವುತ ಆನೆಯ ಮೇಲಿನಿಂದ ಇಳಿದು ಓಡಿಹೋಗಿದ್ದರೆ.ಇದೆ ಹೋರಾಟದಲ್ಲಿ ಅರ್ಜುನ ಆನೆಯು ಹೊಟ್ಟೆಯ ಭಾಗಕ್ಕೆ ಜೋರಾಗಿ ತಿವಿತಕ್ಕೆ ಒಳಗಾಗಿ ರಕ್ತಸ್ರಾವ ಹೆಚ್ಚಾಗಿ ಸಾವನ್ನಪ್ಪಿದೆ.ಕೊನೆಯ ವರೆಗೂ ಏಕಾಂಗಿ ಹೋರಾಟ ನಡೆಸಿದ ಅರ್ಜುನ ಆನೆಯು ಹೋರಾಡುತ್ತಲೇ ತನ್ನ ಜೀವ ಬಿಟ್ಟಿದೆ.

ಆನೆಗೆ ಎಲ್ಲರಿಂದಲೂ ಸಂತಾಪ:

ಅರ್ಜುನ ಆನೆಯು ಒಂಟಿಸಲಾಗದ ವಿರುದ್ಧ ಹೋರಾಡಿ ಮೃತ ಪಟ್ಟಿದ ನಂತರ ಎಲ್ಲರೂ ಸಂತಾಪ ಸೂಚಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಅರ್ಜುನನಿಗೆ ಸಂತಾಪ ಸೂಚಿಸಿದ್ದಾರೆ.ಚಲನಚಿತ್ರ ನಟರಿಂದಲೂ ಸಂತಾಪ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು “ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ” ಎಂದು ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರಾರು ಕೂಡ ಸಂತಾಪ ಸೂಚಿಸಿದ್ದಾರೆ.ಕಾಡಾನೆ ವಿರುದ್ಧ ಹೋರಾಡಿ ಮನ ಹೊಂದಿದ ಅರ್ಜುನ ಎಲ್ಲರಿಗೂ ನೋವುಂಟುಮಾಡಿದೆ.ತಾಯಿ ಚಾಮುಂಡೇಶ್ವರಿ ಅರ್ಜುನನ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸೋಣ.”ಓಂ ಶಾಂತಿ”.

ಇದೆ ರೀತಿಯ ಎಲ್ಲ ಮುಖ್ಯ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

Whatsapp

Telegram

Instagram

Main website

Leave a Reply

Your email address will not be published. Required fields are marked *