ಮೊಬೈಲ್ ಬಳಸಿ ಪ್ರತೀದಿನ ಹಣಗಳಿಸಬಹುದು! ಆದರೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಮೊಬೈಲ್ ಬಳಸಿ ಪ್ರತೀದಿನ ಹಣಗಳಿಸಬಹುದು! ಆದರೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಮೊಬೈಲ್ ಬಳಸಿ ಪ್ರತೀದಿನ ಹಣಗಳಿಸಬಹುದು ! ಹೌದು ಎಲ್ಲಾರಿಗೂ ದುಡಿಯುವುದು ಅಗತ್ಯ ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಪ್ರತಿಯೊಬ್ಬರಿಗೂ ಹಣ ಬೇಕೆ ಬೇಕು.ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ದುಡಿಮೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಆದರೂ ಅವರು ದುಡಿಯುವ ಹಣ ಅವರಿಗೆ ಸಾಲದು ,ಇದರಿಂದ ಮತ್ತಿನ್ನಿತರ ಕೆಲಸಗಳಲ್ಲಿ ಹಣ ಗಳಿಸುವುದು ಹೇಗೆ ? ಎಂದು ಹುಡುಕುತ್ತಲೇ ಇರುತ್ತಾರೆ . ಇದು ಒಂದು ಕಡೆ ಆದರೆ ಇನ್ನೊಂದು ಕಡೆ ವಿಧ್ಯಾರ್ಥಿಗಳು ಸಹಾ ತಮ್ಮ ಸ್ವಂತ ಖರ್ಚಿಗಾಗಿ ಹಣ ಗಳಿಸುವುದು ಹೇಗೆ ಎಂದು ಹುಡುಕುತ್ತಾ ಇರುತ್ತಾರೆ. ಮೊಬೈಲ್ ಬಳಸಿ ಪ್ರತೀದಿನ ಹಣಗಳಿಸಲು ಇಲ್ಲಿದೆ ಸುಲಭ ಮಾರ್ಗ , ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ಪೂರ್ತಿ ಓದಿ.

ಇದೆ ತರಹದ ಹಣಗಳಿಸುವದರ ಬಗ್ಗೆ , ವಿದ್ಯಾರ್ಥಿವೇತನ ಬಗ್ಗೆ, ಕ್ರೀಡೆ ಬಗ್ಗೆ , ಹಾಗೂ ಇಂತಹ ಪ್ರಮುಖ ಮಾಹಿತಿಗಳನ್ನು ಕನ್ನಡದಲ್ಲೇ ತಿಳಿಯಲು Telegram ಗ್ರೂಪ್ ಗೆ ಜಾಯಿನ್ ಆಗಿ.

Telegram ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ .

ಮೊಬೈಲ್ ಬಳಸಿ ಹೇಗೆ ಪ್ರತೀದಿನ ಹಣಗಳಿಸುವುದು ಎಂದು ತಿಳಿಯೋಣ.

ಮೊಬೈಲ್ ಬಳಸಿ ಪ್ರತೀದಿನ ಹಣ ಗಳಿಸಬಹುದು ! ಇತ್ತೀಚೆಗೆ ಪ್ರತಿಯೊಬ್ಬರೂ ಮೊಬೈಲ್ ಅನ್ನು ಬಳಸುತ್ತಿದ್ದಾರೆ. ಮೊಬೈಲ್ ಬಳಸುತ್ತಿರುವ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಇದ್ದಾರೆ. ಆದರೆ ಕೆಲವರಿಗೆ ಮೊಬೈಲ್ ಅನ್ನು ಬಳಸಿ ಹಣಗಳಿಸಬಹುದು ಎಂಬ ಮಾಹಿತಿ ತಿಳಿದೇ ಇಲ್ಲ. ಆದರೆ ಇನ್ನಷ್ಟು ಜನಕ್ಕೆ ಮೊಬೈಲ್ ಬಳಸಿ ಹಣ ಗಳಿಸಬಹುದು ಎಂದು ಗೊತ್ತಿದ್ದರೂ ಸಹಾ ಹೇಗೆ ಎಂದು ಹುಡುಕುತ್ತಿರುತ್ತಾರೆ. ವಿಧ್ಯಾರ್ಥಿಗಳು ಮತ್ತು ಮನೆಯಲ್ಲೇ ಇರುವಂತಹ ಮಹಿಳೆಯರು ಹೆಚ್ಚಾಗಿ ಮೊಬೈಲ್ ಬಳಸಿ ಹೇಗೆ ಎಂದು ಹುಡುಕುತ್ತಿರುತ್ತಾರೆ .ಅವರಿಗಾಗಿ ಇಲ್ಲಿದೆ ಒಂದು ಸುಲಭ ಮಾರ್ಗ. ಅದು ಯಾವುದು ಎಂದರೆ ಅದುವೇ (ಬ್ಲಾಗ್)BLOG ಇದು ಹಣಗಳಿಸಲು ಒಂದು ಒಳ್ಳೆಯ ಉತ್ತಮ ಮಾರ್ಗವಾಗಿದೆ .

ಹಾಗಿದ್ದರೆ ಬ್ಲಾಗ್ (BLOG) ಎಂದರೇನು ? ಇದರಿಂದ ಹೇಗೆ ಹಣ ಗಳಿಸುವುದು ?

ಬ್ಲಾಗ್ ಎಂದರೆ ಯಾವುದೇ ಒಂದು ವಿಷಯವನ್ನು ನಾವು ಲೇಖನ ರೀತಿಯಲ್ಲಿ ತಿಳಿಸುವುದು.ಉದಾಹರಣೆಗೆ ಈಗ ನೀವು ಓದುತ್ತಿರುವ ಈ ಲೇಖನವೇ ಬ್ಲಾಗ್ (blog). ಹಾಗಾದರೆ ಇದರಿಂದ ಹೇಗೆ ಹಣ ಗಳಿಸುವುದು ಎನ್ನುವುದಾದರೆ ಪ್ರತಿದಿನವೂ ನಾವು ಲೇಖನಗಳನ್ನು ಬರೆಯುವ ಮೂಲಕ ಹಣ ಗಳಿಸಬಹುದು . ನಿಮಗೆ ಯಾವ ವಿಷಯ ಹೆಚ್ಚಾಗಿ ತಿಳಿದಿರುತ್ತದೆ ಅದರ ಬಗ್ಗೆ ಲೇಖನಗಳನ್ನು ಬರೆಯಬಹುದು .ಅದನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನಿಮ್ಮ ಸ್ನೇಹಿತರಿಗೆ ಅದನ್ನ ಹಂಚಿಕೊಳ್ಳಬಹುದು .ಇದೆ ತರ ಒಂದಷ್ಟು ಲೇಖನಗಳನ್ನು ಬರೆದ ನಂತರ ಅದನ್ನ ಗೂಗಲ್ ಆಡ್ಸೆನ್ಸ್ (Google Adsense) ge ನಿಮ್ಮ ಲೇಖನಗಳ ಮೇಲೆ ಜಾಹಿರಾತುಗಳನ್ನು ಹಾಕಲು ಕೇಳಬಹುದು . ಗೂಗಲ್ ಆಡ್ಸೆನ್ಸ್ ನಿಮ್ಮ ಲೇಖನಗಳ ಮೇಲೆ ಜಾಹಿರಾತುಗಳನ್ನು ಹಾಕುತ್ತಾರೆ. ಅದನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.ನಿಮ್ಮ ಲೇಖನಗಳ ಮೇಲೆ ಬರುವ ಜಾಹಿರಾತುಗಳನ್ನು ವೀಕ್ಷಕರು ನಿಮ್ಮ ಲೇಖನವನ್ನು ಓದುವಾಗ ಜಾಹಿರಾತುಗಳನ್ನು ನೋಡಿದಾಗ ನಿಮಗೆ ಅದರಿಂದ ಇಂತಿಷ್ಟು ಹಣ ಬರುತ್ತದೆ. ನೀವು ಬ್ಲಾಗ್ ಲೇಖನಗಳನ್ನು ಬರೆಯಲು ನೀವು ನಿಮ್ಮದೇ ಆದ ಸ್ವಂತ (website) ಅನ್ನು ಹೊಂದಿರಬೇಕು .

ವೆಬ್ಸೈಟ್ (Website) ಕ್ರಿಯೇಟ್ ಮಾಡುವುದು ಹೇಗೆ?

ವೆಬ್ಸೈಟ್ ಅನ್ನು ಎರಡು ರೀತಿಯಲ್ಲಿ ರಚಿಸಬಹುದು .ಒಂದು ಉಚಿತವಾಗಿ ನೀವು ನಿಮ್ಮ ವೆಬ್ಸೈಟ್ ಅನ್ನು ರಚಿಸಬಹುದು ಮತ್ತು ನೀವು ಒಂದಿಷ್ಟು ಹಣವನ್ನು ಕೊಟ್ಟು ಅಂದರೆ ನಿಮ್ಮ ವೆಬ್ಸೈಟ್ ಅನ್ನು ರಚಿಸಲು ಹೋಸ್ಟಿಂಗ್ ಮತ್ತು ಡೊಮೈನ್ ಅನ್ನು ಖರೀದಿಸಿ ನಿಮ್ಮ ವೆಬ್ಸೈಟ್ ಅನ್ನು ರಚಿಸಬಹುದು . ಮೊದಲಿಗೆ ಉಚಿತವಾಗಿ ನೀವು ಬ್ಲಾಗ್ ಸ್ಪಾಟ್ Blogspot ಅಲ್ಲಿ ನೀವು ನಿಮ್ಮ ಸ್ವಂತ ವೆಬ್ಸೈಟ್ ಅನ್ನು ರಚಿಸಬಹುದು . ಇದರಲ್ಲಿ ನಿಮಗೆ ಯಾವುದೇ ಡೊಮೈನ್ ಇರುವುದಿಲ್ಲ .ನಿಮಗೆ ಇಷ್ಟವಾದ ರೀತಿಯಲ್ಲಿ ನಿಮ್ಮ ವೆಬ್ಸೈಟ್ ರಚಿಸಿ ಅವಕಾಶ ಇರುವುದಿಲ್ಲ . ಆದರೆ ನೀವು ವರ್ಡ್ ಪ್ರೆಸ್ (wordpress) ಅಲ್ಲಿ ನಿಮ್ಮ ವೆಬ್ಸೈಟ್ ರಚಿಸಿದರೆ ನಿಮಗೆ ಇಷ್ಟವಾದ ರೀತಿಯಲ್ಲಿ ನಿಮ್ಮ ವೆಬ್ಸೈಟ್ ಅನ್ನು ರಚಿಸಬಹುದು ಮತ್ತು ನಿಮಗೆ ಉಚಿತವಾಗಿ ಡೊಮೈನ್ ಸಿಗುತ್ತದೆ. ಆಯ್ಕೆ ನಿಮಗೆ ಬಿಟ್ಟಿದ್ದು. ಮೊದಲಿಗೆ ಶುರು ಮಾಡುವುದಾದರೆ ನೀವು Blogspot ಅಲ್ಲಿ ವೆಬ್ಸೈಟ್ ಅನ್ನು ರಚಿಸಿ .ಅದರಿಂದ ನಿಂಗೆ ಲೇಖನಗಳನ್ನು ಬರೆಯುವುದು ಅಭ್ಯಾಸ ಆಗುತ್ತದೆ. ನಂತರದ ದಿನಗಳಲ್ಲಿ ನೀವು ನಿಮ್ಮ ವೆಬ್ಸೈಟ್ ಅನ್ನು wordpress ಅಲ್ಲಿ ರಚಿಸಿ ಕೊಳ್ಳಬಹುದು.

ಮೊಬೈಲ್ ಬಳಸಿ ಹಣಗಳಿಸಬೇಕು ಅಂದು ಕೊಂಡಿರುವಂತ ವರಿಗೆ ಇದು ಒಂದು ಸುಲಭ ಮಾರ್ಗವಾಗಿದೆ. ಏಕೆಂದರೆ ಇಲ್ಲಿ ಕೇವಲ ನಿಮಗೆ ತಿಳಿದಿರುವ ವಿಷಯವನ್ನು ಬರೆದು ಅದನ್ನು ಪೋಸ್ಟ್ ಮಾಡಿದರೆ ಸಾಕು. ಮೊಬೈಲ್ ಅನ್ನು ಬಳಸುವ ಎಲ್ಲಾರಿಗೂ ಟೈಪಿಂಗ್ ಮಾಡುವುದು ಗೊತ್ತಿರುತ್ತದೆ. ಬ್ಲಾಗ್ ಬರೆಯಲು ಇಂಗ್ಲಿಷ್ ಅಲ್ಲೇ ಬರೆಯಬೇಕು ಎನ್ನುವ ಹಾಗಿಲ್ಲ ಇದನ್ನ ಕನ್ನಡದಲ್ಲೇ ನಿಮ್ಮದೇ ಭಾಷೆ ಅಲ್ಲಿ ಬರೆಯಬಹುದು . ಇದು ಮನೆಯಲ್ಲಿರುವ ಮಹಿಳೆಯರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಹಣಗಳಿಸಲು ಒಳ್ಳೆಯ ಮಾರ್ಗ ವಾಗಿದೆ.

ಇದೆ ರೀತಿಯ ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ಟೆಲಿಗ್ರಾಂ (TELEGRAM) ಗ್ರೂಪ್ ಗೆ ಮತ್ತು WhatsApp ಗೆ ಜಾಯಿನ್ ಆಗಿ. ಇದೆ ರೀತಿಯ ಮೊಬೈಲ್ ಬಳಸಿ ಹಣಗಳಿಸುವುದರ ಬಗ್ಗೆ ತಿಳಿಯಬಹುದು.

TELEGRAM ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ .

WhatsApp ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಧನ್ಯವಾದ

2 thoughts on “ಮೊಬೈಲ್ ಬಳಸಿ ಪ್ರತೀದಿನ ಹಣಗಳಿಸಬಹುದು! ಆದರೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

  1. James Jernigan, the AI marketing guru, has a knack for simplifying complex AI concepts. His YouTube channel is a fantastic resource for those looking to harness the power of AI in their online endeavors. Don’t miss his insights!

Leave a Reply

Your email address will not be published. Required fields are marked *